Language Community

Amaravaani ಅಮರವಾಣಿ
 
Notifications
Clear all

Amaravaani ಅಮರವಾಣಿ

(@chat-askrangoo-com)
Admin Admin
Joined: 1 year ago
Posts: 174
Topic starter  

ಅತ್ತಿ ಮರ ಕಾಯ,
ಹೊತ್ತಿರ್ದ ತೆರನಂತೆ
ತತ್ವಭೇದವನು ಅರಿಯದಲೇ ರುದ್ರಾಕ್ಷ
ಹೊತ್ತು ಫಲವೇನು?
ಸರ್ವಜ್ಞ.

ಅತ್ತಿಯ ಮರದ ತುಂಬಾ
ಕಾಯಿಗಳಿದ್ದರೂ , ಆ ಕಾಯಿಗಳ ತತ್ವ ರಹಸ್ಯ ವನ್ನು ಮರ ತಿಳಿಯದು.
ಅಂತೆಯೇ ರುದ್ರಾಕ್ಷಿ
ಧಾರಣೆಯನ್ನು ತತ್ವವನ್ನು ಅರಿಯದೇ,
ಕೇವಲ ಬಾಹ್ಯಾಡಂಬರ
ರೂಪದಲ್ಲಿ ಅದನ್ನು
ಧರಿಸಿದರೆ, ಅಂತಹ
ಯೋಗಿ ಅತ್ತಿ ಮರದಂತೆ
ವ್ಯರ್ಥ ಎನಿಸುವನು.
ಸರ್ವಜ್ಞ.

ಸಂಗ್ರಹ, ರಂಗಣ್ಣ🙏


   
Quote
(@chat-askrangoo-com)
Admin Admin
Joined: 1 year ago
Posts: 174
Topic starter  

ಅಮರಚಿಂತನ

ಜಬ್ ಮೈ ಥಾ ತಬ್ ಹರಿ
ನಹೀ, ಜಬ್ ಹರಿ ಹೈ
ಮೈ ನಹೀ/
ಸಬ್ ಅಂಧಿಯಾರಾ ಮಿಟ್ ಗಯಾ,
ಜಬ್ ದೀಪಕ್ ದೇಖ್ಯಾ
ಮಹೀ//

('ನಾನು' ಇದ್ದಾಗ ಹರಿ
ಇರಲಿಲ್ಲ, ಹರಿ ಇದ್ದಾಗ
ನಾನು ಇರಲಿಲ್ಲ:
ಯಾವಾಗ ನಾನು ನನ್ನೊಳಿಗಿನ ಬೆಳಕನ್ನು
ಕಂಡೆನೋ ಆಗ ನನ್ನೊಳಗಿನ ಕತ್ತಲೆಯು
ಕರಗಿತು.

ಮಹಾತ್ಮಕಬೀರರ ದೋಹಾ.

ಸಂಗ್ರಹ, ರಂಗಣ್ಣ🙏🏻


   
ReplyQuote
(@chat-askrangoo-com)
Admin Admin
Joined: 1 year ago
Posts: 174
Topic starter  

ಅಮರವಾಣಿ

ಉಪಕಾರಿಕಿ ನುಪಕಾರಮು ವಿಪರೀತ ಮುಗಾದು ಸೇಯವಿವರಿಂಪಂಗಾ.
ಸುಪಕಾರಿಕಿ ಸುಪಕಾರಮು ನೆಪಮೆನ್ನಕ ಸೇಯುವಾಡು ನೇರ್ಪರಿ
ಸುಮತಿ.

ಉಪಕಾರ ಮಾಡಿದವನಿಗೆ ಒಳ್ಳೆಯದು ಮಾಡುವುದು ದೊಡ್ಡ ವಿಷಯವಲ್ಲ.
ಹಾನಿ ಮಾಡಿದವನಿಗೆ
ಅದಕ್ಕೂ ಮೊದಲು ಅವನು ಮಾಡಿದ ದೋಷಗಳನ್ನು ಲೆಕ್ಕಿಸದೆ
ಉಪಕಾರ ಮಾಡುವವನೇ ಒಳ್ಳೆಯ
ಮತಿಯುಳ್ಳವನು.

(ತೆಲುಗಿನ ಕವಿ
ಭದ್ರಭೂಪಾಲ)
ಸಂಗ್ರಹ, ‌ರಂಗಣ್ಣ.🙏🏻


   
ReplyQuote
(@chat-askrangoo-com)
Admin Admin
Joined: 1 year ago
Posts: 174
Topic starter  

ಅಮರಸುಧಾ

ಚಿಂತಾಯಾಶ್ಚ ಚಿತಾಯಾಶ್ಚ ಬಿಂದು ಮಾತ್ರಂ ವಿಶಿಷ್ಯತೇ/
ಚಿತಾ ದಹತಿ ನಿರ್ಜೀವಂ
ಚಿಂತಾ ದಹತಿ ಜೀವಿನಮ್//

ಚಿತೆಗೂ, ಚಿಂತೆಗೂ ಒಂದು ಸೊನ್ನೆ ಮಾತ್ರ
ವ್ಯತ್ಯಾಸ. ಚಿತೆ ಜೀವವಿಲ್ಲದ ಶರೀರವನ್ನು ಸುಡುತ್ತದೆ.
ಚಿಂತೆ ಜೀವವಿರುವವರನ್ನು
ಸುಡುತ್ತದೆ.

ಸಂಗ್ರಹ, ರಂಗಣ್ಣ🙏🏻


   
ReplyQuote
(@chat-askrangoo-com)
Admin Admin
Joined: 1 year ago
Posts: 174
Topic starter  

ಅಮರವಾಣಿ

ಸುಖಮಾಪತಿತಂ
ಸೇವೇತ್ ದುಃಖಮಾಪತಿತಂ
ಸಹೇತ್/
ಚಕ್ರವತ್ ಪರಿವರ್ತಂತೆ
ಸುಖದುಃಖಾನಿ ಚ//

ಸುಖ ಬಂದಾಗ ಜೀವನವನ್ನು
ಆಸ್ವಾದಿಸಬೇಕು.
ದುಃಖವನ್ನು ಸಹಿಸ
ಕೊಳ್ಳಬೇಕು.
ಸುಖದುಃಖಗಳು
ಒಂದಾದ ಮೇಲೊಂದರಂತೆ
ಬರುತ್ತವೆ. ರಾತ್ರಿ ಕಳೆದ
ಮೇಲೆ ಹಗಲು ಬರಲೇ
ಬೇಕು. ಹಾಗೆಯೇ
ದುಃಖ ಕಳೆದ ಮೇಲೆ
ಸುಖದ ದಿನಗಳು
ಬರುವುದೆಂಬ ಭರವಸೆಯಲ್ಲಿ
ಬದುಕಬೇಕು.

ಸಂಗ್ರಹ, ರಂಗಣ್ಣ🙏


   
ReplyQuote
(@chat-askrangoo-com)
Admin Admin
Joined: 1 year ago
Posts: 174
Topic starter  

ಅಮರವಾಣಿ

ಜೈಸೆ ತಿಲ್ ಮೆ ತೇಲ್ ಹೈ, ಜ್ಯೋ ಚಕ್ ಮಕ್
ಮೆ ಆಗ್/
ತೇರಾ ಸಾಯೀ ತುಝ್ ಮೆ ತೂ ಜಾಗ್ ಸಕೇತೋ ಜಾಗ್//

ಎಳ್ಳಿನಲ್ಲಿ ಎಣ್ಣಿ ಇರುವಂತೆ, ಚಕಮಕಿ
ಕಲ್ಲಿನಲ್ಲಿ ಬೆಂಕಿ ಇರುವಂತೆ, ನಿನ್ನ
ದೇವರು ನಿನ್ನೊಳಗೆ ಇದ್ದಾನೆ; ಅವನನ್ನು
ಎಚ್ಚರಿಸಲು ಸಾಧ್ಯವಾದರೆ ಎಚ್ಚರಿಸು.

(ಮಹಾತ್ಮ ಕಬೀರರ ದೋಹಾ)
ಸಂಗ್ರಹ, ರಂಗಣ್ಣ🙏🏻


   
ReplyQuote
(@chat-askrangoo-com)
Admin Admin
Joined: 1 year ago
Posts: 174
Topic starter  

ಅಮರವಾಣಿ

ಮಾಟೀ ಕಹೈ ಕುಂಹಾರ ಸೂ, ಕ್ಯಾ ತೂ ರೋಂಧೆ
ಮೋಹಿ/
ಇಕ ದಿನಾ ಐಸಾ ಆಯೆಗಾ, ಮೈ ರೋಧೋಂಗಿ ತೋಹಿ//

ಮಣ್ಣು ಕುಂಬಾರನಿಗೆ
ಹೇಳಿತು, ನೀನೇಕೆ ನನ್ನನ್ನು ತುಳಿಯುತ್ತಿದ್ದೀಯಯೆ.
ಮುಂದೊಂದು ಅಂತಹ ದಿನ ಬರುತ್ತದೆ.
ಆಗ ನಾನು ನಿನ್ನನ್ನು ತುಳಿಯುತ್ತೇನೆ.

(ಮಹಾತ್ಮ ಕಬೀರ್)
ಸಂಗ್ರಹ, ರಂಗಣ್ಣ🙏🏻


   
ReplyQuote
(@chat-askrangoo-com)
Admin Admin
Joined: 1 year ago
Posts: 174
Topic starter  

ಅಮರವಾಣಿ

ಜೈಸೆ ತಿಲ್ ಮೆ ತೇಲ್ ಹೈ, ಜ್ಯೋ ಚಕ್ ಮಕ್
ಮೆ ಆಗ್/
ತೇರಾ ಸಾಯೀ ತುಝ್ ಮೆ ತೂ ಜಾಗ್ ಸಕೇತೋ ಜಾಗ್//

ಎಳ್ಳಿನಲ್ಲಿ ಎಣ್ಣಿ ಇರುವಂತೆ, ಚಕಮಕಿ
ಕಲ್ಲಿನಲ್ಲಿ ಬೆಂಕಿ ಇರುವಂತೆ, ನಿನ್ನ
ದೇವರು ನಿನ್ನೊಳಗೆ ಇದ್ದಾನೆ; ಅವನನ್ನು
ಎಚ್ಚರಿಸಲು ಸಾಧ್ಯವಾದರೆ ಎಚ್ಚರಿಸು.

(ಮಹಾತ್ಮ ಕಬೀರರ ದೋಹಾ)
ಸಂಗ್ರಹ, ರಂಗಣ್ಣ🙏🏻

 The supreme creator is within you as the oil is within the seasme seed and the fire is within the flint rocks (that give out fire when rubbed together). Become aware of the supreme within you if you can.


   
ReplyQuote
(@chat-askrangoo-com)
Admin Admin
Joined: 1 year ago
Posts: 174
Topic starter  

ಸುಜ್ಞಾನಾಮೃತ

ನರಕಿನ ಯಾ ಕೊಮ್ಮೆ
ತಾನು ಕೂಲಿನ ವಿಧಮುನ್,
ತುದ ಮೊದಲೆರುಗನಿ
ಮನುಜಡು
ತಾನೆರುಗಡು ಎವರೈನ
ಚಪ್ಪಿನ ವಿನಡು//

ಮರದ ತುದಿಕೊಂಬೆಯ
ಮೇಲೆ ನಿಂತುಕೊಂಡು
ಕಡಿದಾಗ ಆ ಕೊಂಬೆಯೊಡನೆ ತಾನೂ
ಬೀಳುವ ಹಾಗೆ,
ತುದಿ ಮೊದಲುಗಳನ್ನು
ತಿಳಿಯದ ಮನುಷ್ಯನು
ತಾನು ಅರಿಯುವುದಿಲ್ಲ;
ಯಾರಾದರೂ ಹೇಳಿದರು ಕೇಳುವುದಿಲ್ಲ.
-- ಶ್ರೀ ನಾರೇಯಣ ಕವಿ.

ಸಂಗ್ರಹ, ರಂಗಣ್ಣ🙏


   
ReplyQuote
Share: