ಅತ್ತಿ ಮರ ಕಾಯ,
ಹೊತ್ತಿರ್ದ ತೆರನಂತೆ
ತತ್ವಭೇದವನು ಅರಿಯದಲೇ ರುದ್ರಾಕ್ಷ
ಹೊತ್ತು ಫಲವೇನು?
ಸರ್ವಜ್ಞ.
ಅತ್ತಿಯ ಮರದ ತುಂಬಾ
ಕಾಯಿಗಳಿದ್ದರೂ , ಆ ಕಾಯಿಗಳ ತತ್ವ ರಹಸ್ಯ ವನ್ನು ಮರ ತಿಳಿಯದು.
ಅಂತೆಯೇ ರುದ್ರಾಕ್ಷಿ
ಧಾರಣೆಯನ್ನು ತತ್ವವನ್ನು ಅರಿಯದೇ,
ಕೇವಲ ಬಾಹ್ಯಾಡಂಬರ
ರೂಪದಲ್ಲಿ ಅದನ್ನು
ಧರಿಸಿದರೆ, ಅಂತಹ
ಯೋಗಿ ಅತ್ತಿ ಮರದಂತೆ
ವ್ಯರ್ಥ ಎನಿಸುವನು.
ಸರ್ವಜ್ಞ.
ಸಂಗ್ರಹ, ರಂಗಣ್ಣ🙏
ಅಮರಚಿಂತನ
ಜಬ್ ಮೈ ಥಾ ತಬ್ ಹರಿ
ನಹೀ, ಜಬ್ ಹರಿ ಹೈ
ಮೈ ನಹೀ/
ಸಬ್ ಅಂಧಿಯಾರಾ ಮಿಟ್ ಗಯಾ,
ಜಬ್ ದೀಪಕ್ ದೇಖ್ಯಾ
ಮಹೀ//
('ನಾನು' ಇದ್ದಾಗ ಹರಿ
ಇರಲಿಲ್ಲ, ಹರಿ ಇದ್ದಾಗ
ನಾನು ಇರಲಿಲ್ಲ:
ಯಾವಾಗ ನಾನು ನನ್ನೊಳಿಗಿನ ಬೆಳಕನ್ನು
ಕಂಡೆನೋ ಆಗ ನನ್ನೊಳಗಿನ ಕತ್ತಲೆಯು
ಕರಗಿತು.
ಮಹಾತ್ಮಕಬೀರರ ದೋಹಾ.
ಸಂಗ್ರಹ, ರಂಗಣ್ಣ🙏🏻
ಅಮರವಾಣಿ
ಉಪಕಾರಿಕಿ ನುಪಕಾರಮು ವಿಪರೀತ ಮುಗಾದು ಸೇಯವಿವರಿಂಪಂಗಾ.
ಸುಪಕಾರಿಕಿ ಸುಪಕಾರಮು ನೆಪಮೆನ್ನಕ ಸೇಯುವಾಡು ನೇರ್ಪರಿ
ಸುಮತಿ.
ಉಪಕಾರ ಮಾಡಿದವನಿಗೆ ಒಳ್ಳೆಯದು ಮಾಡುವುದು ದೊಡ್ಡ ವಿಷಯವಲ್ಲ.
ಹಾನಿ ಮಾಡಿದವನಿಗೆ
ಅದಕ್ಕೂ ಮೊದಲು ಅವನು ಮಾಡಿದ ದೋಷಗಳನ್ನು ಲೆಕ್ಕಿಸದೆ
ಉಪಕಾರ ಮಾಡುವವನೇ ಒಳ್ಳೆಯ
ಮತಿಯುಳ್ಳವನು.
(ತೆಲುಗಿನ ಕವಿ
ಭದ್ರಭೂಪಾಲ)
ಸಂಗ್ರಹ, ರಂಗಣ್ಣ.🙏🏻
ಅಮರಸುಧಾ
ಚಿಂತಾಯಾಶ್ಚ ಚಿತಾಯಾಶ್ಚ ಬಿಂದು ಮಾತ್ರಂ ವಿಶಿಷ್ಯತೇ/
ಚಿತಾ ದಹತಿ ನಿರ್ಜೀವಂ
ಚಿಂತಾ ದಹತಿ ಜೀವಿನಮ್//
ಚಿತೆಗೂ, ಚಿಂತೆಗೂ ಒಂದು ಸೊನ್ನೆ ಮಾತ್ರ
ವ್ಯತ್ಯಾಸ. ಚಿತೆ ಜೀವವಿಲ್ಲದ ಶರೀರವನ್ನು ಸುಡುತ್ತದೆ.
ಚಿಂತೆ ಜೀವವಿರುವವರನ್ನು
ಸುಡುತ್ತದೆ.
ಸಂಗ್ರಹ, ರಂಗಣ್ಣ🙏🏻