Share some Puzzles and Riddles in Kannada in this section. Answer the puzzles and riddles posted by others. Please give pronunciation and translation to help those who are just learning Kannada.
Here is one sample for you.
ಕಣ್ಣಿಗೆ ಕಾಣೋದಿಲ್ಲ, ಕೈಗೆ ಸಿಗೋದಿಲ್ಲ. ಏನದು?
Kaṇṇige kāṇōdilla, kaige sigōdilla. Enadhu?
Cannot be seen with the eyes, cannot be caught with hands?
Waiting for your answers....
ಮೂರಕ್ಷರ- ಎರಡಕ್ಷರ
ಪದಗಳ ಆಟ ಇನ್ನೊಂದು ಬಗೆ ಇದು.
ಮೂರಕ್ಷರ ಪದದಲ್ಲಿ
ಮಧ್ಯೆ ಇರುವ ಅಕ್ಷರ
ತೆಗೆದರೆ ಬೇರೆ ಅರ್ಥ
ಬರುವಂತ ಆಟ ಇದಾಗಿದೆ.
ಉದಾಹರಣೆಗೆಃ
"ಕುಶಲ" ಪದ.
ಕುಶಲ ದಲ್ಲಿ
ಮಧ್ಯದ ಅಕ್ಷರ ಶ ತೆಗೆದರೆ ಕುಲವಾಗುತ್ತೆ.
ಅದಕ್ಕೆ ಪ್ರಶ್ನೆ :
* ಕ್ಷೇಮದ ಜೋಡಿ ಪದ.
** ವಂಶ
ಉತ್ತರ: * ಕುಶಲ
** ಕುಲ
(ಕು ಶ ಲ)
......
ಪ್ರಶ್ನಾವಳಿ:
೧) * ನವಿಲು.
** ವೃಕ್ಷ
೨) * ರೋಗಿಯನ್ನು
ಚೆನ್ನಾಗಿ ನೋಡಿಕೊಳ್ಳುವ ಸೇವೆ.
** ಅವಳು
೩) * ಗಾಯನ ಕಲೆ
** ಸನ್ಯಾಸಿ
೪) * ಒಂದು ಪಕ್ಷದ
ಸದಸ್ಯ ಪತ್ರಿಕೆಗೆ
ಪಕ್ಷದ ಪರವಾಗಿ
ಮಾತಾಡುವುದು.
** ಮದುಮಗ
೫) * ಪಟ್ಟಣ
** ಮಾನವ
೬) * ಒಂದು ರೀತಿಯ
ಚರ್ಮ ವಾದ್ಯ
** ಬುದ್ಧಿ ವಂತ ಪ್ರಾಣಿ
೭) * ಅಪಹರಿಸುವಿಕೆ
** ಧನ
೮) * ದಫನ್ ಮಾಡುವ ಜಾಗ
** ತೂಕ (೧೦ ಕಿಲೊ)
೯) * ಸೂರ್ಯ
** ಅತಿಯಾದ ತೂಕ
೧೦) * ಮನುಷ್ಯ
** ಹೆಂಡತಿಯ ತಂದೆ
೧೧) * ಕೊಡಲಿ
** ಹಸು
೧೨) * ಈ ಸಹಸ್ರ ನಾಮವನ್ನು ಹೆಂಗಸರು
ಪಠಣ ಮಾಡುತ್ತಾರೆ.
** ಬಳ್ಳಿ
೧೩) * ನಾಕು ಮಂದಿ
** ಬಾಳೆಯಿಂದ
ತೆಗೆಯುವ ದಾರ
೧೪) * ನಾಯಿ
** ಗಿಣಿ
೧೫) * ಬಾಲ್ಯಾವಸ್ಥೆ
** ವೈಷ್ಣವ ತರಹ
ಇನ್ನೊಂದು ಪಂಥ
೧೬) * ಸಾಲು
** ಹೆಂಡತಿ
೧೭) * ವ್ಯಾಯಾಮ
ಮಾಡುವ ಜಾಗ
** ದೇಶದ, ರಾಜ್ಯದ ಎಲ್ಲೆ
೧೮) * ಪ್ರಸ್ತುತ
** ತಪ್ಪು ಪದದ
ವಿರುದ್ಧ ಪದ
೧೯) * ಶ್ರೀ ಕೃಷ್ಣನ
ಗುರುಕುಲದ ಮಿತ್ರ.
** ವಂಶ
೨೦) * ವಾಸನೆ ಹಾಕಿದ ಅಡಿಕೆ.
** ಚೆಲ್ಲು
ರಂಗಣ್ಣ
Answers:
೧ ಮಯೂರ :ಮರಸ
೨ ಆರೈಕೆ : ಆಕೆ
೩ ಸಂಗೀತ : ಸಂತ
೪
೫ ನಗರಯ : ನರ
೬ ನಗಾರಿ : ವಯ್ರ್
೭ ಹರಣ : ಹಣ
೮ ಮರಣ : ಮಣ
೯ ಭಾರ್ಗವ : ಭಾರ
೧೦ ಮಾನವ : ಮಾವ
೧೧ ಪರಶು : ಪಶು
೧೨ ಲಲಿತಾ : ಲತಾ
೧೩ ನಾಲ್ಕಾರು : ನಾರು
೧೪ ಶುನಕ : ಶುಕ
೧೫
೧೬ ಸರತಿ : ಸತಿ
೧೭ ಗರಡಿ : ಗಡಿ
೧೮ ಸದರಿ : ಸರಿ
೧೯ ಕುಚೇಲ : ಕುಲ
೨೦ ಸುಪಾರಿ : ಸುರಿ